ತುಷ್ಟಿ -
ತನಗೆ ಇದ್ದುದರಲ್ಲೇ ದೊರೆತುದರಲ್ಲೇ ತೃಪ್ತಿಯನ್ನು ಕಾಣುವ ಗುಣ. ಹೀಗೆಂದ ಮಾತ್ರಕ್ಕೆ ಮಾನವ ತಾನಿರುವ ಪರಿಸ್ಥಿತಿ ಅಥವಾ ನೆಲೆಯಿಂದ ಅಭಿವೃದ್ಧಿ ಪಡೆಯಲು ಯತ್ನಿಸಬಾರದು ಎಂದಲ್ಲ. ತಾತ್ಪರ್ಯ ಏನೆಂದರೆ, ತನ್ನ ಸ್ಥಿತಿ ಗತಿ ಹೀಗಾಯಿತಲ್ಲಾ ಇತರರಿಗಿಂತ ಕೀಳಾದೆನಲ್ಲ ಎಂದು ಮತ್ಸರ ಪಡೆದಿರುವುದು. ಏಕೆಂದರೆ ದು:ಖ, ಮತ್ಸರ, ಉದ್ವೇಗಗಳಿಂದ ಯಾವುದನ್ನೂ ಸಾಧಿಸಲಾಗುವುದಿಲ್ಲ. ಫಲ ಬರುವವರೆಗೆ ಇದ್ದುದರಲ್ಲಿ ಸಮಾಧಾನ ತಾಳಬೇಕು. ಫಲ ಬಂದಮೇಲೆ ಅವರ ಸಾಕುಬೇಕುಗಳ ವಿವೇಚನೆ ನಡೆಸಿ, ಲೌಕಿಕ ಜೀವನದಲ್ಲಿ ತನ್ನ ವರ್ತನೆಯನ್ನು ರೂಪಿಸಿಕೊಳ್ಳಬೇಕು.

ತುಷ್ಟಿಯೂ ಒಂದು ವಿಧದಲ್ಲಿ ಇಂದ್ರಿಯ ನಿಗ್ರಹವೇ ಆಗಿದೆ. ಇಂದ್ರಿಯ ನಿಗ್ರಹದ ಶ್ರಮ, ದಮ, ಉಪೇಕ್ಷೆ, ಸಮತ್ವ ಮುಂತಾದ ಮುಖ್ಯವಾದ ಹನ್ನೆರಡು ಗುಣಗಳಲ್ಲಿ ಇದೂ ಒಂದು.

ತುಷ್ಟಿ ಸುಖದ ಸಂತೋಷದ ಮೂಲ. ಸಂತೋಷಂ ಪರಮಾಸ್ಥಾಯ ಸುಖಾರ್ಥಿ ಸಂಯತೋ ಭವೇತ್ (ಸಂತೋಷವನ್ನು ಬಯಸುವವರು ಸಂಯಮಿಗಳಾಗಿರಬೇಕು ಮತ್ತು ತುಷ್ಟಿಯಲ್ಲಿ ಪಡೆದಿರಬೇಕು.) ಎಂದು ಮನುಸ್ಮøತಿಯಲ್ಲಿ ಹೇಳಿದೆ.

ತುಷ್ಟಿಯನ್ನು ಚೆನ್ನಾಗಿ ತಿಳಿಯಲು ಕೆಲವು ಉದಾಹರಣೆಗಳನ್ನು ಕೊಡಬಹುದು. ಕಠೋಪನಿಷತ್ತಿನ ನಚಿಕೇತನ ಕತೆ ಸರ್ವವಿದಿತ. ಯಮಧರ್ಮ ಬಾಲಕ ನಚಿಕೇತನಿಗೆ ನೂರಾರು ಆಸೆಗಳನ್ನು ತೋರಿಸಿದರೂ ಅವುಗಳಿಂದ ವಿಚಲಿತನಾಗದೆ ಆತ ತನಗೆ ಬೇಕಾಗಿರುವ ಆತ್ಮe್ಞÁನವನ್ನು ದಯಪಾಲಿಸುವಂತೆ ಬೇಡುತ್ತಾನೆ.

ಹಾಗೆಯೇ ಇನ್ನೊಂದು ಉದಾಹರಣೆ ಕೊಡಬಹುದು. ಬಲಿಚಕ್ರವರ್ತಿ ಇನ್ನೆಂದಿಗೂ ಯಾರಿಂದಲೂ ಏನನ್ನೂ ಬೇಡಲಾಗದ ಸಂಪತ್ತನ್ನು ಕೊಡುತ್ತೇನೆಂದು ವಾಮನರೂಪಿ, ವಿಷ್ಣುವಿಗೆ ಹೇಳಿದಾಗ ಅವನು ತುಷ್ಟಿಬೋಧಕವಾದ ಈ ಮಾತನ್ನು ಹೇಳುತ್ತಾನೆ.

ಯದೃಚ್ಛಯೋಪಪನ್ನೇನ ಸಂತುಷ್ಟೋ ವರ್ತತೇ ಸುಖಂ |
ನಾಸಂತುಷ್ಟಸ್ತ್ರಿಭಿರ್ಲೋಕೈರಜಿತಾತ್ಮೋಪಸಧಿತೈ: ||
ಪುಂಸೋsಯ: ಸಂಸ್ರುತೇರ್ಹೇತುರಸಂತೋಷೋರ್ಥಕಾಮಯೋ: |
ಯದೃಚ್ಛಯೋಪಪನ್ನೇನ ಸಂತೋಷೋ ಮುಕ್ತಯೇ ಸ್ಮøತ: ||				(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ